ಸುರಭಿ ಮುದ್ರೆ

surabhi mudra

ಸುರಭಿ ಮುದ್ರೆ ಅಥವಾ ಗೋ ಮುದ್ರೆ

ವಿವರಣೆ

ಈ ಮುದ್ರೆಯನ್ನು ಮಾಡಲು ಎರಡು ಹಸ್ತಗಳ ಬೆರಳುಗಳನ್ನು ಈ ಕೆಳಗಿನಂತೆ ಸಂಯೋಜಿಸಬೇಕು: ಎಡಗೈ ಕಿರುಬೆರಳು ಬಲಗೈ ಉಂಗುರದ ಬೆರಳನ್ನು ಹಾಗೂ ಬಲಗೈ ಕಿರುಬೆರಳು ಎಡಗೈ ಉಂಗುರದ ಬೆರಳನ್ನು ಸ್ಪರ್ಶಿಸಲಿ. ಅಂತೆಯೇ, ಎರಡೂ ಕೈಗಳ ಮಧ್ಯದ ಬೆರಳುಗಳು ಪರಸ್ಪರ ಇನ್ನೊಂದು ಕೈಯ ತೋರು ಬೆರಳುಗಳನ್ನು ತಾಗುವಂತೆ ಇರಲಿ. ಹೆಬ್ಬೆರಳುಗಳನ್ನು ಮಾತ್ರ ನೇರವಾಗಿ ಚಾಚಿರಬೇಕು. ನೋಡಲು ಈ ಭಂಗಿಯು ಹಸುವಿನ ನಾಲ್ಕು ಕೆಚ್ಚಲುಗಳ ಆಕೃತಿಯನ್ನು ಹೋಲುತ್ತದೆ.

ಅಭ್ಯಾಸ ಮತ್ತು ಪ್ರಯೋಜನಗಳು:

  • ಈ ಮುದ್ರೆಯನ್ನು ಪ್ರತಿದಿನ ಕನಿಷ್ಠ 15 ನಿಮಿಷಗಳ ಕಾಲ ಅಭ್ಯಾಸ ಮಾಡುವುದು ಉತ್ತಮ. ವಿಶೇಷವಾಗಿ ಕೀಲು ನೋವು ಮತ್ತು ಸಂಧಿವಾತದಿಂದ ಬಳಲುತ್ತಿರುವವರಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ. ದೀರ್ಘಕಾಲದ ಸಮಸ್ಯೆ ಇರುವವರು ಹೆಚ್ಚಿನ ಸಮಯ ಇದನ್ನು ಮಾಡಬೇಕು.
  • ಕ್ರಮಬದ್ಧವಾದ ಸಾಧನೆಯಿಂದ ಧ್ಯಾನದ ಸ್ಥಿತಿಯಲ್ಲಿ ಉನ್ನತ ಮಟ್ಟದ ಆಧ್ಯಾತ್ಮಿಕ ಅನುಭವಗಳನ್ನು ಪಡೆಯಬಹುದು.
  • ದೇಹದಲ್ಲಿನ ವಾತ, ಪಿತ್ತ ಮತ್ತು ಕಫ ಎಂಬ ತ್ರಿಜೋಷಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ಸಹಕಾರಿ.
  • ಧಾರ್ಮಿಕ ವಿಧಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಗಾಯತ್ರಿ ಮಂತ್ರವನ್ನು ಜಪಿಸುವಾಗ ಈ ಮುದ್ರೆಯನ್ನು ಪ್ರದರ್ಶಿಸಿದರೆ ಮಂತ್ರದ ಪ್ರಭಾವವು ಹತ್ತು ಪಟ್ಟು ಹೆಚ್ಚಾಗುತ್ತದೆ.
  • ಇದು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ, ಮನುಷ್ಯನಲ್ಲಿ ಸೃಜನಶೀಲ ಶಕ್ತಿಯನ್ನು ವೃದ್ಧಿಸುತ್ತದೆ.
hakini

ಹಾಕಿಣಿ ಮುದ್ರೆ

ಹಾಕಿಣಿ ಮುದ್ರೆ ವಿವರಣೆ ಮತ್ತು ಜಪಿಸುವ ವಿಧಾನ ಹಾಕಿಣಿಯು ನಮ್ಮ ಭ್ರೂಮಧ್ಯದಲ್ಲಿರುವ ಆಜ್ಞಾ...

Read More

What do you feel about this post?

0%
like

Like

0%
love

Love

0%
happy

Happy

0%
care

Care