ಶಂಖ ಮುದ್ರೆ

shankha mudra

ಶಂಖ ಮುದ್ರೆ

ವಿವರಣೆ 

ಎಡಗೈ ಹೆಬ್ಬೆರಳನ್ನು ಬಲಗೈ ನಾಲ್ಕು ಬೆರಳುಗಳ ಮಧ್ಯೆ ಇರಿಸಿ ಮುಷ್ಠಿ ಹಿಡಿಯಿರಿ. ಇದೇ ವೇಳೆ, ಬಲಗೈ ಹೆಬ್ಬೆರಳನ್ನು ಎಡಗೈ ಮಧ್ಯದ ಬೆರಳಿಗೆ ಸ್ಪರ್ಶಿಸಿ. ಎರಡೂ ಕೈಗಳನ್ನು ಈ ರೀತಿ ಜೋಡಿಸಿದಾಗ ಅದು ಶಂಖದ ಆಕಾರವನ್ನು ಪಡೆಯುತ್ತದೆ. ಈ ಹಸ್ತ ಭಂಗಿಯನ್ನು ನಿಮ್ಮ ಎದೆಯ ಭಾಗಕ್ಕೆ ಹತ್ತಿರವಾಗಿ ಇರಿಸಿಕೊಳ್ಳಿ. ಪ್ರತಿ ದಿನ ಸುಮಾರು 15 ನಿಮಿಷಗಳ ಕಾಲ ಮೂರು ಬಾರಿ ಇದನ್ನು ಅಭ್ಯಾಸ ಮಾಡುವುದು ಉತ್ತಮ. ಈ ಮುದ್ರೆಯಲ್ಲಿದ್ದಾಗ ‘ಓಂಕಾರ’ವನ್ನು ಮಂತ್ರದಂತೆ ಪಠಿಸಿ, ನಂತರ ಆ ಪ್ರಣವ ನಾದದ ಕಂಪನವನ್ನು ನಿಮ್ಮೊಳಗೆ ಮೌನವಾಗಿ ಆಲಿಸಿ.

ಪ್ರಯೋಜನಗಳು

  • ಈ ಮುದ್ರೆಯು ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಮತ್ತು ಧಾರ್ಮಿಕ ವಿಧಿಗಳಲ್ಲಿ ಬಳಕೆಯಲ್ಲಿದೆ. ಇದು ನಮ್ಮ ಒಳಗಿನ ಜ್ಞಾನದ ಬಾಗಿಲನ್ನು ತೆರೆಯಲು ಸಹಕರಿಸುತ್ತದೆ.
  • ‘ಓಂ’ ಮಂತ್ರದೊಂದಿಗೆ ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಸ್ವರವು ಸ್ಪಷ್ಟವಾಗುತ್ತದೆ ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
  • ಇದು ಮನಸ್ಸಿಗೆ ನೆಮ್ಮದಿಯನ್ನು ನೀಡುವುದಲ್ಲದೆ, ದೇಹದ ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ.
  • ಅಂಗೈಯಲ್ಲಿರುವ ನರಬಿಂದುಗಳ ಮೇಲೆ ಒತ್ತಡ ಬೀಳುವುದರಿಂದ ರಕ್ತದೊತ್ತಡ, ಕಿಡ್ನಿ, ಯಕೃತ್ತು (Liver) ಮತ್ತು ಥೈರಾಯ್ಡ್ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿ ಅವುಗಳು ಶಕ್ತಿಯುತವಾಗುತ್ತವೆ.
Hakini Mudra hand gesture for memory and concentration.

ಹಾಕಿಣಿ ಮುದ್ರೆ

ಹಾಕಿಣಿ ಮುದ್ರೆ ವಿವರಣೆ ಮತ್ತು ಜಪಿಸುವ ವಿಧಾನ ಹಾಕಿಣಿಯು ನಮ್ಮ ಭ್ರೂಮಧ್ಯದಲ್ಲಿರುವ ಆಜ್ಞಾ...

Read More

What do you feel about this post?

0%
like

Like

0%
love

Love

0%
happy

Happy

0%
care

Care