ಕಾಳೇಶ್ವರ ಮುದ್ರೆ

kaleshwara mudra

ವಿವರಣೆ: ನಿಮ್ಮ ಎರಡು ಹಸ್ತಗಳ ಮಧ್ಯದ ಬೆರಳುಗಳ (Middle fingers) ತುದಿಗಳನ್ನು ಪರಸ್ಪರ ಜೋಡಿಸಿ ನೇರವಾಗಿಡಿ. ತೋರುಬೆರಳುಗಳ (Index fingers) ಮೊದಲ ಎರಡು ಗಿಣ್ಣುಗಳು ಒಂದಕ್ಕೊಂದು ಸಂಪೂರ್ಣವಾಗಿ ಸ್ಪರ್ಶಿಸುವಂತೆ ಮಾಡಿ. ಹೆಬ್ಬೆರಳುಗಳ ತುದಿಗಳನ್ನು ಒಟ್ಟಿಗೆ ಸೇರಿಸಿ ಎದೆಯ ಕಡೆಗೆ (ಹೃದಯದ ಭಾಗಕ್ಕೆ) ಮುಖ ಮಾಡಿ ಹಿಡಿಯಿರಿ. ಇನ್ನುಳಿದ ಉಂಗುರದ ಬೆರಳು ಮತ್ತು ಕಿರುಬೆರಳುಗಳನ್ನು ಒಳಮುಖವಾಗಿ ಮಡಚಿರಿ. ನಿಮ್ಮ ಮೊಣಕೈಗಳನ್ನು ಹೊರಗಡೆ ಚಾಚಿಟ್ಟುಕೊಂಡು, ಅತ್ಯಂತ ನಿಧಾನವಾಗಿ ಹತ್ತು ಬಾರಿ ಉಸಿರಾಟ (ಉಸಿರನ್ನು ಒಳಗೆ ತಗೆದುಕೊಂಡು ಹೊರಬಿಡುವುದು) ಮಾಡಿ. ನಿಮ್ಮ ಅಭ್ಯಾಸ ಹೆಚ್ಚಾದಂತೆ ಈ ಉಸಿರಾಟದ ಸಂಖ್ಯೆಯನ್ನು ಇನ್ನೂ ಹೆಚ್ಚು ಮಾಡಬಹುದು.

ಪ್ರಯೋಜನಗಳು ಮತ್ತು ಮಹತ್ವ:
·ಈ ಮುದ್ರೆಯು ಮನಸ್ಸಿನಲ್ಲಿ ಅತಿಯಾಗಿ ಹರಿಯುವ ಆಲೋಚನೆಗಳ ಸುಳಿಯನ್ನು ನಿಯಂತ್ರಿಸಿ, ತಳಮಳ ಅಥವಾ ಆತಂಕದ ಭಾವನೆಗಳನ್ನು ಪ್ರಶಾಂತಗೊಳಿಸುತ್ತದೆ.
·ಇದು ನಮಗೆ ಅತ್ಯುನ್ನತ ಮಾನಸಿಕ ಸ್ಪಷ್ಟತೆಯನ್ನು ನೀಡುವುದಲ್ಲದೆ, ನಮ್ಮ ತಪ್ಪು-ಒಪ್ಪುಗಳನ್ನು ನಾವೇ ಅರಿತುಕೊಳ್ಳಲು (ಆತ್ಮಾವಲೋಕನಕ್ಕೆ) ದಾರಿ ಮಾಡಿಕೊಡುತ್ತದೆ.
·ನಮ್ಮ ದೈನಂದಿನ ಜೀವನದ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಮತ್ತು ನಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಇದು ಸಹಕಾರಿಯಾಗಿದೆ.
·ಉತ್ತಮ ಜ್ಞಾಪಕ ಶಕ್ತಿ, ಏಕಾಗ್ರತೆ ಹಾಗೂ ಜೀವನದಲ್ಲಿರುವ ಕೆಟ್ಟ ಹವ್ಯಾಸ ಅಥವಾ ಚಟಗಳಿಂದ ಮುಕ್ತಿ ಪಡೆಯಲು ಈ ಮುದ್ರೆಯು ರಾಮಬಾಣವಾಗಿದೆ.

·ಸಮಯ: ಈ ಮುದ್ರೆಯನ್ನು ದಿನನಿತ್ಯ ೧೦ ರಿಂದ ೨೦ ನಿಮಿಷಗಳ ಕಾಲ ಅಭ್ಯಾಸ ಮಾಡಬಹುದು.

vayu mudra

ವಾಯು ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ನಿಮ್ಮ ಎರಡೂ ಕೈಗಳ ತೋರುಬೆರಳನ್ನು ಮಡಚಿ, ಅದರ ತುದಿಯನ್ನು...

Read More
sandhi mudra

ಸಂಧಿ ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ಬಲಗೈ ಭಂಗಿ: ನಿಮ್ಮ ಬಲಗೈಯ ಹೆಬ್ಬೆರಳು ಮತ್ತು ಉಂಗುರದ...

Read More

What do you feel about this post?

0%
like

Like

0%
love

Love

0%
happy

Happy

0%
care

Care