ಜ್ಞಾನ ಮುದ್ರೆ ಮತ್ತು ಚಿನ್ ಮುದ್ರೆ

jana mudra chin mudra

ವಿವರಣೆ: ಹೆಬ್ಬೆರಳಿನ ತುದಿಭಾಗವು ತೋರುಬೆರಳಿನ ತುದಿಭಾಗಕ್ಕೆ ಸ್ಪರ್ಶವಾಗುವಂತೆ ಮಾಡಿ, ಉಳಿದ ಮೂರು ಬೆರಳುಗಳನ್ನು ನೇರವಾಗಿ ಚಾಚಿರಬೇಕು. ಕೈಗಳನ್ನು ಸಡಿಲಗೊಳಿಸಿ ತೊಡೆಗಳ ಮೇಲಿರಿಸಬೇಕು. ಬೆರಳುಗಳ ತುದಿಗಳು ಆಕಾಶದತ್ತ ಮುಖ ಮಾಡಿದ್ದರೆ ಅದನ್ನು ‘ಜ್ಞಾನ ಮುದ್ರೆ’ ಎನ್ನಲಾಗುತ್ತದೆ. ಅದೇ ರೀತಿ ಬೆರಳುಗಳು ಭೂಮಿಯ ಕಡೆಗೆ ನಮನವಾಗಿದ್ದರೆ ಅದು ‘ಚಿನ್ ಮುದ್ರೆ’ ಎನಿಸಿಕೊಳ್ಳುತ್ತದೆ. ಇನ್ನೊಂದು ವಿಧಾನದಲ್ಲಿ ಹೆಬ್ಬೆರಳಿನ ತುದಿಯನ್ನು ತೋರುಬೆರಳಿನ ಪ್ರಥಮ ಗಂಟಿನ ಭಾಗಕ್ಕೆ ತಾಗಿಸಬಹುದು. ಜ್ಞಾನ ಮುದ್ರೆ ಶಕ್ತಿಯನ್ನು ಗ್ರಹಿಸುವ ಸ್ಥಿತಿಯನ್ನು ಸೂಚಿಸಿದರೆ, ಚಿನ್ ಮುದ್ರೆ ಶಕ್ತಿಯನ್ನು ಹಂಚುವ ಅಥವಾ ನೀಡುವ ಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ.

ಪರಿಣಾಮ ಹಾಗೂ ಸಂಕೇತ: ಹೆಬ್ಬೆಟ್ಟಿನ ತುದಿಯು ಪಿಟ್ಯೂಟರಿ ಮತ್ತು ಪೀನಿಯಲ್ ಗ್ರಂಥಿಗಳ ಕೇಂದ್ರವಾಗಿರುವುದರಿಂದ, ಆ ಜಾಗದ ಮೇಲೆ ಒತ್ತಡ ಬಿದ್ದಾಗ ಅವು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತವೆ. ಇದು ದೈಹಿಕ ಹಾಗೂ ಮಾನಸಿಕ ಸಮತೋಲನಕ್ಕೆ ಸಹಕಾರಿ. ನೇರವಾದ ಮೂರು ಬೆರಳುಗಳು ಪ್ರಕೃತಿಯ ತ್ರಿಗುಣಗಳಾದ ಸತ್ವ, ರಜಸ್ ಮತ್ತು ತಮಸ್ ಅನ್ನು ಪ್ರತಿನಿಧಿಸುತ್ತವೆ. ಹೆಬ್ಬೆರಳು ಮತ್ತು ತೋರುಬೆರಳಿನಿಂದ ಉಂಟಾಗುವ ವರ್ತುಲವು ಜೀವಾತ್ಮವು ಪರಮಾತ್ಮನೊಂದಿಗೆ ಲೀನವಾಗುವ ದಿವ್ಯ ಸಾನ್ನಿಧ್ಯದ ಸಂಕೇತವಾಗಿದೆ.

ಪ್ರಯೋಜನಗಳು: ಈ ಮುದ್ರೆಯ ಸತತ ಅಭ್ಯಾಸದಿಂದ ಏಕಾಗ್ರತೆ ಮತ್ತು ಸ್ಮರಣಶಕ್ತಿ ವೃದ್ಧಿಯಾಗುತ್ತದೆ. ಅತಿಯಾದ ನಿದ್ರೆ, ನಿದ್ರಾಹೀನತೆ ಹಾಗೂ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಇದು ರಾಮಬಾಣ. ಮಾನಸಿಕ ಉದ್ವೇಗಗಳನ್ನು ಶಮನಗೊಳಿಸಿ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಗಾಯತ್ರೀ ಮಂತ್ರದ ಜಪದೊಂದಿಗೆ ಈ ಮುದ್ರೆಯನ್ನು ಅನುಸರಿಸುವುದರಿಂದ ದೈವೀ ಪ್ರಜ್ಞೆ ಜಾಗೃತವಾಗಿ, ನಿಸ್ವಾರ್ಥ ಭಾವ ಮೂಡುತ್ತದೆ. ಅಲ್ಲದೆ, ಇದು ತಪ್ಪು ಚಟಗಳನ್ನು ನಿಯಂತ್ರಿಸಲು ನೆರವಾಗುತ್ತದೆ.

vayu mudra

ವಾಯು ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ನಿಮ್ಮ ಎರಡೂ ಕೈಗಳ ತೋರುಬೆರಳನ್ನು ಮಡಚಿ, ಅದರ ತುದಿಯನ್ನು...

Read More
sandhi mudra

ಸಂಧಿ ಮುದ್ರೆ

ವಿವರಣೆ ಮತ್ತು ಅಭ್ಯಾಸ ಕ್ರಮ:ಬಲಗೈ ಭಂಗಿ: ನಿಮ್ಮ ಬಲಗೈಯ ಹೆಬ್ಬೆರಳು ಮತ್ತು ಉಂಗುರದ...

Read More

What do you feel about this post?

0%
like

Like

0%
love

Love

0%
happy

Happy

0%
care

Care