ಕುಬೇರ ಮುದ್ರೆ

kubera mudra for success, internal peace and confidence

ಕುಬೇರ ಮುದ್ರೆ

ವಿವರಣೆ 

ನಿಮ್ಮ ಹೆಬ್ಬೆರಳು, ತೋರುಬೆರಳು ಹಾಗೂ ಮಧ್ಯದ ಬೆರಳಿನ ತುದಿಗಳನ್ನು ಒಟ್ಟಿಗೆ ಸೇರಿಸಿ. ಉಳಿದ ಉಂಗುರದ ಬೆರಳು ಮತ್ತು ಕಿರುಬೆರಳುಗಳನ್ನು ಮಡಚಿ, ಅವುಗಳ ತುದಿಗಳು ಅಂಗೈಯ ಮಧ್ಯಭಾಗಕ್ಕೆ ಮುಟ್ಟುವಂತೆ ಇರಿಸಿ. ಈ ಮುದ್ರೆಯನ್ನು ಎರಡೂ ಕೈಗಳಲ್ಲಿ ಏಕಕಾಲದಲ್ಲಿ ಅಭ್ಯಾಸ ಮಾಡಬೇಕು. ಇದನ್ನು ಎಷ್ಟು ನಿಮಿಷಗಳ ಕಾಲ ಮಾಡುತ್ತೀರಿ ಎನ್ನುವುದಕ್ಕಿಂತಲೂ, ಎಷ್ಟು ಏಕಾಗ್ರತೆ ಹಾಗೂ ತೀವ್ರತೆಯಿಂದ ಮಾಡುತ್ತೀರಿ ಎನ್ನುವುದು ಬಹಳ ಮುಖ್ಯ.

ಲಾಭ ಹಾಗೂ ವಿಶೇಷತೆಗಳು

  • ಈ ಮುದ್ರೆಯು ನಮ್ಮ ಮನಸ್ಸಿನ ಆಸೆ ಹಾಗೂ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಒಂದು ಪ್ರಬಲ ಸಾಧನವಾಗಿದೆ.
  • ನಿಮ್ಮ ಗುರಿ, ಮಹತ್ವಾಕಾಂಕ್ಷೆ, ಯೋಜನೆ ಅಥವಾ ನೀವು ಪಡೆಯಬೇಕಾದ ಗುರಿಯನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿ ಕಲ್ಪಿಸಿಕೊಂಡು (Visualize), ಸಂಪೂರ್ಣ ಧ್ಯಾನಮಗ್ನರಾಗಿ ಈ ಮುದ್ರೆಯನ್ನು ಅಭ್ಯಾಸ ಮಾಡಿದರೆ ಅತಿ ಶೀಘ್ರದಲ್ಲಿ ಉತ್ತಮ ಫಲಿತಾಂಶಗಳು ಸಿಗುತ್ತವೆ.
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಕುಜ (ಮಂಗಳ), ಗುರು ಮತ್ತು ಶನಿ ಗ್ರಹಗಳ ಶಕ್ತಿಯನ್ನು ಒಟ್ಟುಗೂಡಿಸಿ ಸಾಧನೆ ಮಾಡಲು ನೆರವಾಗುತ್ತದೆ. ಈ ಮೂರು ಗ್ರಹಗಳ ಅದ್ಭುತ ಶಕ್ತಿಯನ್ನು ನಾವು ಈ ಮುದ್ರೆಯ ಮೂಲಕ ನಮ್ಮೊಳಗೆ ಆಹ್ವಾನಿಸಿದಂತಾಗುತ್ತದೆ.
  • ಇದು ವ್ಯಕ್ತಿಯಲ್ಲಿ ಆಂತರಿಕ ನೆಮ್ಮದಿಯನ್ನು ವೃದ್ಧಿಸುವುದಲ್ಲದೆ, ಆತ್ಮವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
Hakini Mudra hand gesture for memory and concentration.

ಹಾಕಿಣಿ ಮುದ್ರೆ

ಹಾಕಿಣಿ ಮುದ್ರೆ ವಿವರಣೆ ಮತ್ತು ಜಪಿಸುವ ವಿಧಾನ ಹಾಕಿಣಿಯು ನಮ್ಮ ಭ್ರೂಮಧ್ಯದಲ್ಲಿರುವ ಆಜ್ಞಾ...

Read More

What do you feel about this post?

0%
like

Like

0%
love

Love

0%
happy

Happy

0%
care

Care